Bale Chaa Parka@West Coast Park

Bale Chaa Parka@West Coast Park
Kannada Version

ತುಳುವೆರ್ ಸಿಂಗಪುರದ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ೦೮ ಮಾರ್ಚ್ ರಂದು ಸಿಂಗಪುರದ ವೆಸ್ಟ್ ಕೋಸ್ಟ್ ಪಾರ್ಕ್ ನಲ್ಲಿ ಅನಿವಾಸಿ ಭಾರತೀಯ ತುಳುಭಾಷಿಗರು ಕಾರ್ಯಕ್ರಮ ಸಂಯೋಜಕರಾದ ಶ್ರೀ ಕೃಷ್ಣಪ್ರಸಾದ್ ಆಚಾರ್ಯ ಅವರ ಮುಂದಾಳತ್ವದಲ್ಲಿ  ”ಬಲೇ ಚಾ ಪರ್ಕ” ಎಂಬ ಹೆಸರಿನಲ್ಲಿ ಅದ್ದೂರಿಯಾಗಿ ಆಚರಿಸಿದರು. ಮೊದಲಿಗೆ ತುಳುವೆರ್ ಸಿಂಗಪೋರ್ ಸಂಘದ ಸಂಯೋಜಕರಾದ ಶ್ರೀ ನಿತ್ಯಾನಂದ ಹೆಗ್ಡೆ ಎಲ್ಲರನ್ನು ಮಹಿಳಾ ದಿನಾಚರಣೆಯಾ ”ಬಲೇ ಚಾ ಪರ್ಕ” ಕಾರ್ಯಕ್ರಮಕ್ಕೆ ಸ್ವಾಗತಿಸಿ ಸಂಘದ ವತಿಯಿಂದ ಯೋಜಿಸಲಾದ ಈ ವರ್ಷದ ವಿವಿಧ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ತುಂತುರು ಮಳೆಯ ನಡುವೆ ಆರಂಭವಾದ ಕಾರ್ಯಕ್ರಮ, ಸ್ವಾಗತ ಭಾಷಣದ ನಂತರ ಆಕೃತಿ ಸ್ಕೂಲ್ ಓಫ್ ಆರ್ಟ್ಸ್ ನ ಶ್ರೀಮತಿ ಪ್ರಿಯ ಕರ್ಕಡ ಅವರ ನಿರ್ದೇಶನದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ಭಾಗವಹಿಸಿದ ಸರ್ವರಿಗೂ ವಿವಿಧ ಆಟೋಟ ಸ್ಪರ್ಧೆ ಯನ್ನು ರಿತೇಶ್ ಹೆಗ್ಡೆ ಅವರು ನಿರ್ವಹಿಸಿದರು. ತದನಂತರ ಕರಾವಳಿಯ ವಿವಿಧ ಖಾದ್ಯಗಳನ್ನು ಅವರವರ ಮನೆಯಿಂದ ತಯಾರಿಸಿ ತಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಎಲ್ಲರು ಒಂದುಗೂಡಿ ಸವಿದರು. ಇಂದಿನ ಕಾರ್ಯಕ್ರಮ ಸಂಯೋಜಿಸಿದ ಶ್ರೀ ಕೃಷ್ಣಪ್ರಸಾದ್ ಆಚಾರ್ಯ ಅವರು ವಿಶ್ವ ಮಹಿಳಾ ದಿನಾಚರಣೆ ಬಗ್ಗೆ ಸ್ವರಚಿತ ಕವನ ವಾಚನ ಮಾಡಿದರು. ಆಟೋಟ ಹಾಗು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯರಾದ ಸರ್ವರಿಗೂ ಬಹುಮಾನ  ವಿತರಿಸಲಾಯಿತು. ಕೊನೆಯಲ್ಲಿ ತುಳುವೆರ್ ಸಿಂಗಪೋರ್ ಸಂಘದ ಸಂಯೋಜಕರಾದ ಶ್ರೀ ರಾಜೇಶ್ ಆಚಾರ್ಯ ಅವರು ಎಲ್ಲರಿಗೂ ಧನ್ಯವಾದ  ಸಮರ್ಪಣೆ  ಮಾಡಿ ಶೀಘ್ರದಲ್ಲೇ ಸಂಘದ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಎಂದು ಹಾರೈಸಿ “ಬಲೇ ಚಾ ಪರ್ಕ” ಕಾರ್ಯಕ್ರಮವನ್ನು ಅಂತ್ಯ ಗೊಳಿಸಲಾಯಿತು.

Image link
Read in English

On March 8th 2025 a Saturday, Tuluver Singapore celebrated International Women’s Day in a grand manner at West Coast Park under the name “Bale Cha Parka!” organized by Shri.Krishna Prasad Acharya. Initially, Shri.Nithyananda Hegde, the coordinator of Tuluver Singapore, welcomed everyone to the “Bale Cha Parka!@West Coast Park” Women’s Day program and explained the various activities planned by the Tuluver Singapore community for this year. The program, which began amidst a drizzle, continued after the welcome speech with a drawing competition for women and children directed by Smt.Priya Karkada of Akrithi School of Arts. Various games and sports activities were conducted for all participants by Shri.Ritesh Hegde. Following this, everyone who participated in the program enjoyed together the various coastal delicacies prepared from their homes. Shri. Krishna Prasad Acharya also recited a poem about International Women’s Day. Prizes were distributed to all the winners who participated in the games and sports and drawing competitions. Finally, Shri.Rajesh Acharya, the coordinator of Tuluver Singapore, offered thanks to everyone and wished for their participation in the upcoming community events for the year, concluding the “Bale Cha Parka!@West Coast Park” program.

Related Posts
Leave a Reply

Your email address will not be published.Required fields are marked *